ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಿಂಗ್ಸರ್ ಡಿಂಗ್ಕೊ ಸಿಂಗ್ ಸಾವು

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಗ್ಕೊ ಸಿಂಗ್ ಪಿತ್ತಜನಕಾಂಗದ ಕ್ಯಾನ್ಸರ್ ವಿರುದ್ಧದ ಸುದೀರ್ಘ ಹೋರಾಟದ ನಂತರ ಗುರುವಾರ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು ಮತ್ತು 2017 ರಿಂದ ಅವರು ಆನಾರೋಗ್ಯದಿಂದ ಬಳಲುತ್ತಿದ್ದರು.

Last Updated : Jun 10, 2021, 03:59 PM IST
  • ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಗ್ಕೊ ಸಿಂಗ್ ಪಿತ್ತಜನಕಾಂಗದ ಕ್ಯಾನ್ಸರ್ ವಿರುದ್ಧದ ಸುದೀರ್ಘ ಹೋರಾಟದ ನಂತರ ಗುರುವಾರ ನಿಧನರಾದರು.
ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಿಂಗ್ಸರ್ ಡಿಂಗ್ಕೊ ಸಿಂಗ್ ಸಾವು  title=

ನವದೆಹಲಿ: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಗ್ಕೊ ಸಿಂಗ್ ಪಿತ್ತಜನಕಾಂಗದ ಕ್ಯಾನ್ಸರ್ ವಿರುದ್ಧದ ಸುದೀರ್ಘ ಹೋರಾಟದ ನಂತರ ಗುರುವಾರ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು ಮತ್ತು 2017 ರಿಂದ ಅವರು ಆನಾರೋಗ್ಯದಿಂದ ಬಳಲುತ್ತಿದ್ದರು.

ಇದನ್ನೂ ಓದಿ : Mumbai: ಭಾರಿ ಮಳೆಯಿಂದಾಗಿ ಧರೆಗುರುಲಿದ ನಾಲ್ಕು ಅಂತಸ್ತಿನ ಕಟ್ಟಡ, 11 ಮಂದಿ ಮೃತ, ಹಲವರಿಗೆ ಗಾಯ

ಡಿಂಗ್ಕೊ ಸಿಂಗ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ (PM Modi) "ಶ್ರೀ ಡಿಂಗ್ಕೊ ಸಿಂಗ್ ಅವರು ಕ್ರೀಡಾ ಸೂಪರ್ಸ್ಟಾರ್ ಆಗಿದ್ದರು, ಅವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರು ಮತ್ತು ಬಾಕ್ಸಿಂಗ್ ಜನಪ್ರಿಯತೆಯನ್ನು ಹೆಚ್ಚಿಸಲು ಅವರು ಮಹತ್ವದ ಕೊಡುಗೆಯನ್ನು ನೀಡಿದರು ಎಂದು ಟ್ವೀಟ್ ಮಾಡಿದ್ದಾರೆ.

ಶ್ರೀ ಡಿಂಗ್ಕೊ ಸಿಂಗ್ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ.ಭಾರತದ ಅತ್ಯುತ್ತಮ ಬಾಕ್ಸರ್ ಗಳಲ್ಲಿ ಒಬ್ಬರಾಗಿದ್ದರು, 1998 ರ ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟದಲ್ಲಿ ಡಿಂಕೊ ಅವರ ಚಿನ್ನದ ಪದಕವು ಭಾರತದಲ್ಲಿ ಬಾಕ್ಸಿಂಗ್ ಸರಣಿ ಬೆಳವಣಿಗೆಯನ್ನು ಹುಟ್ಟುಹಾಕಿತು.ದುಃಖಿತ ಕುಟುಂಬಕ್ಕೆ ನನ್ನ ಪ್ರಾಮಾಣಿಕ ಸಂತಾಪವನ್ನು ಅರ್ಪಿಸುತ್ತೇನೆ" ಎಂದು ಕ್ರೀಡಾ ಸಚಿವ ಕಿರೆನ್ ರಿಜಿಜು ತಮ್ಮ ಟ್ವೀಟ್ ನಲ್ಲಿ ಬರೆದಿದ್ದಾರೆ.

'ಅವರ ಜೀವನ ಪಯಣ ಮತ್ತು ಹೋರಾಟವು ಮುಂಬರುವ ಪೀಳಿಗೆಗೆ ಒಂದು ಮೂಲ ಪ್ರೇರಣೆಯಾಗಿ ಉಳಿಯಲಿ.ಈ ದುಃಖವನ್ನು ಬರಿಸುವ ಶಕ್ತಿಯನ್ನು ಅವರ ಕುಟುಂಬ ಕಂಡುಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಭಾರತದ ಮೊದಲ ಒಲಿಂಪಿಕ್ ಪದಕ ವಿಜೇತ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಿಂಗ್ಕೊ 1998 ರಲ್ಲಿ ಏಷ್ಯನ್ ಗೇಮ್ಸ್ ಚಿನ್ನ ಗೆದ್ದರು ಮತ್ತು ಅದೇ ವರ್ಷ ಅರ್ಜುನ ಪ್ರಶಸ್ತಿಯನ್ನು ಪಡೆದರು. 2013 ರಲ್ಲಿ, ಅವರು ಕ್ರೀಡೆಯಲ್ಲಿ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಇದನ್ನೂ ಓದಿ : ಪೊಲೀಸ್ ಶೂಟೌಟ್‌ನಲ್ಲಿ ಜೈಪಾಲ್ ಭುಲ್ಲರ್ ಹತ್ಯೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News